ಕೆಂದಲೆ ಕಳ್ಳಿಪೀರ | Chestnut-headed Bee-eater

info heading

info content

ಹಕ್ಕಿ ಪರಿಚಯ
ಇತರ ಹೆಸರುಗಳು ಕೆಂದಲೆ ಕಳ್ಳಿಪೀರ, ಕೆಮ್ಮಂಡೆ ಗಣಿಗಾರ್ಲ ಹಕ್ಕಿ
ಹಕ್ಕಿ ವಿವರಣೆ ಪಿಕಳಾರ ಗಾತ್ರದ ಹಕ್ಕಿ. ತಲೆ ಮತ್ತು ಬೆನ್ನು ಹೊಬಣ್ಣದಿಂದ ಕೂಡಿರುತ್ತದೆ. ಕೆನ್ನೆ ಮತ್ತು ಕುತ್ತಿಗೆ ಹಳದಿ ಬಣ್ಣ. ಕುತ್ತಿಗೆಯ ಸುತ್ತ ಕೆಂಬಣ್ಣದ ಉಂಗುರವಿದೆ. ಕಣ್ಣಿನ ಸುತ್ತ ಕಪ್ಪು ಹುಬ್ಬು, ಚೂಪಾದ ಕೆಳಕ್ಕೆ ಕೊಂಕಿರುವ ಕೊಕ್ಕು.
ವಿಶೇಷತೆಗಳು ಸಾಧಾರಣವಾಗಿ ಮರಗಳಿರುವೆಡೆಗಳಲ್ಲಿ ಮರಗಳ ಬೋಳು ಕೊಂಬೆಗಳ ಮೇಲು ಸಾಲುಗಟ್ಟಿ ಹಲವಾರು ಕುಳಿತಿರುತ್ತವೆ. ಹರಿದ್ವರ್ಣದ ಕಾಡುಗಳಿಗೂ ಉದುರೆಲೆಯ ಕಾಡುಗಳಿಗೂ ನಡುವೆ ಇವು ಇರುತ್ತವೆ. ರಾತ್ರಿ ತಮಗೆ ಬಳಕೆಯಾದ ಮರಗಳಲ್ಲಿ ಎಲ್ಲ ಹಕ್ಕಿಗಳೂ ಒಟ್ಟಿಗೆ ಸೇರಿ ಒತ್ತೊತ್ತಾಗಿ ಕುಳಿತು ನಿದ್ರಿಸುತ್ತವೆ. ಗಣಿಗಣಿ ಎಂದು ಗೆಜ್ಜೆ ಸದ್ದಿನಂತೆ ಕೂಗುತ್ತವೆ.
ಆಹಾರ ಕ್ರಮ ಹಾರುವ ಕೀಟಗಳನ್ನು, ಸಾಧಾರಣವಾಗಿ ಜೇನುಹುಳಗಳನ್ನು ಹಿಡಿದು ತಿನ್ನುತ್ತವೆ.
ಗೂಡು ಕಟ್ಟುವ ವಿಧಾನ ಫೆಬ್ರವರಿಯಿಂದ ಏಪ್ರಿಲ್ವರೆಗೆ ನದಿಯ ಕೊರಕಲು ದಂಡೆಗಳಲ್ಲಿ ಪೊಟ್ಟರೆ ಕೊರೆದು ಗೂಡು ಮಾದುತ್ತವೆ.
ಕಾಣಸಿಗುವ ಸ್ಥಳಗಳು ಭಾರತದಲ್ಲಿ ಬೆಳಗಾಂನಿಂದ ಕೆಳಗೆ ಮತ್ತು ಅಸ್ಸಾಂ ಕಾಡುಗಳಲ್ಲಿ, ಸಿಲೋನ್, ಬಂಗ್ಲಾದೇಶ, ಬರ್ಮಾಗಳಲ್ಲಿ ಇವೆ.
ಚಿತ್ರ ಕೃಪೆ Clement M Francis
Common English Name Chestnut-headed Bee-eater
Conservation Status Least Concern
Scientific Classification
Scientfic Name Merops leschenaulti
Kingdom Animalia
Class Aves
Order coraciiformes
Superfamily
Family
Subfamily
Tribe
Genus
Species