ಸಣ್ಣ ಕಳ್ಳಿಪೀರ | Small Bee-eater

info heading

info content

ಹಕ್ಕಿ ಪರಿಚಯ
ಇತರ ಹೆಸರುಗಳು ಸಣ್ಣ ಕಳ್ಳಿಪೀರ, ಗಣಿಗಾರಲು ಹಕ್ಕಿ
ಹಕ್ಕಿ ವಿವರಣೆ ಗುಬಚ್ಚಿ ಗಾತ್ರದ ಹಕ್ಕಿ. ಹಸುರು ಪ್ರಧಾನವಾಗಿ, ತಲೆಯ ಮೇಲೆ ಕಿತ್ತಳೆ ಬಣ್ಣವೂ ಬೆನ್ನಮೇಲೆ ತೆಳು ನೀಲಿ ಬಣ್ಣವು ಪ್ರಧಾನವಗಿವೆ. ಪುಕ್ಕದ ಎರಡು ಗರಿಗಳು ನೀಳವಾಗಿ ಚೂಪಾಗಿವೆ. ತೆಳ್ಳಗಿರುವ ಉದ್ದವಾದ ಕೊಂಚ ಕೊಂಕಿರುವ ಕೊಕ್ಕು. ಕುತ್ತಿಗೆಯ ಮೇಲೆ ಕಪ್ಪು ಪಟ್ಟಿ ಇದೆ.
ವಿಶೇಷತೆಗಳು ಗುಂಪಾಗಿ ಅಥವಾ ಜೋಡಿಗಳಲ್ಲಿ ಬಯಲು ಜಾಗಗಳಲ್ಲಿ ಟೆಲಿಗ್ರಾಫ್ ತಂತಿಗಳ ಮೇಲೆ ಇಲ್ಲವೇ ಮರದಿಂದ ಹೊರಚಾಚಿಕೊಂಡಿರುವ ಬೋಳು ಕಡ್ಡಿಗಳ ಮೇಲೆ ಬೇಲಿಗಳ ಗೂಟಗಳ ಮೇಲು ಕುಳಿತಿರುತ್ತವೆ. ದಟ್ಟ ಕಾಡುಗಳಲ್ಲಿ ಅಪೂರ್ವ. ಹೆಚ್ಚಾಗಿ ಹಳ್ಳಿಗಳ ಹೊರವಲಯದಲ್ಲಿ ಉದ್ಯಾನಗಳಲ್ಲಿ ಪಾಳು ಜಾಗಗಳಲ್ಲಿ ಇರುತ್ತವೆ. ಹಾರಾಡುವ ಜೇನುಗಳನ್ನು ಇಲ್ಲವೇ ಇತರ ಕೀಟಗಳನ್ನು ಹಿಡಿಯಲು ಆಗಾಗ ಹಾರಿ ಕೂರುತ್ತವೆ. ಹಾರಿದವು ಸುತ್ತು ಹೊಡೆದು ತೇಲುತ್ತಾ ಹಾರಿದಲ್ಲಿಗೇ ಬಂದು ಕೂರುತ್ತವೆ. ಗಣಿಗಣಿ ಎಂದು ಗೆಜ್ಜೆ ಸದ್ದಿನಂತೆ ಕೂಗುತ್ತವೆ.
ಆಹಾರ ಕ್ರಮ ಜೇನುಗಳು, ಇತರ ಕೀಟಗಳು
ಗೂಡು ಕಟ್ಟುವ ವಿಧಾನ ಫೆಬ್ರವರಿಯಿಂದ ಮೇವರೆಗೆ ಇವು ನೆಲದಲ್ಲಿ ಇಲ್ಲವೇ ಕೊರಕಲು ಗೋಡೆಗಲಲ್ಲಿ ಬಿಲ ಕೊರೆದು ಗೂಡು ಮಾಡುತ್ತವೆ
ಕಾಣಸಿಗುವ ಸ್ಥಳಗಳು ಭಾರತ, ಬಂಗ್ಲಾದೇಶ, ಸಿಲೋನ್, ಬರ್ಮಾ, ಪಾಕೀಸ್ತಾನ.
ಚಿತ್ರ ಕೃಪೆ Deepak L M
Common English Name Small Bee-eater
Conservation Status Least Concern
Scientific Classification
Scientfic Name Merops orientalis
Kingdom Animalia
Class Aves
Order coraciiformes
Superfamily
Family
Subfamily
Tribe
Genus
Species