ಹಕ್ಕಿ ಪರಿಚಯ | |
---|---|
ಇತರ ಹೆಸರುಗಳು | ನೀಲಿ ತಲೆಯ ಬಂಡೆಸಿಳ್ಳಾರ, ನೀಲಿ ಬಂಡೆ ಕಲ್ಲು ಗುಟುರ |
ಹಕ್ಕಿ ವಿವರಣೆ | ಪಿಕಳಾರ ಗಾತ್ರದ ಹಕ್ಕಿ, ತಲೆ ಕುತ್ತಿಗೆ ಗಲ್ಲ ಮತ್ತು ರೆಕ್ಕೆಯ ಅಂಚು ಪಚ್ಚೆ ನೀಲಿ ಬಣ್ಣ, ಬೆನ್ನು ಬಾಲ ಕಂದುಗಪ್ಪು, ಎದೆ ಹೊಟ್ಟೆ ಕಿತ್ತಳೆ ಬಣ್ಣ, ಹಾರುವಾಗ ಬಿಳಿಯ ಪಟ್ಟೆ ಕಾಣಿಸುತ್ತದೆ. |
ವಿಶೇಷತೆಗಳು | ನಿತ್ಯಹರಿದ್ವರ್ಣ ಕಾಡುಗಳು ಸೇರಿದಂತೆ ಹಿಮಾಲಯದಲ್ಲಿ ಸಮುದ್ರಮಟ್ಟದಿಂದ ಮೂರು ಸಾವಿರ ಅಡಿಯಿಂದ ಆರು ಸಾವಿರ ಅಡಿಗಳವರೆಗಿನ ಕಾಡುಗಳಲ್ಲಿ ಕಾಣಿಸುತ್ತದೆ. ಗಂಡುಹಕ್ಕಿ ಮರಿ ಮಾಡುವ ಸಂದರ್ಭದಲ್ಲಿ ನಿರಂತರ ಸಿಳ್ಳಿನ ರಾಗಾಪಾಲನೆ ಮಾಡುತ್ತದೆ. |
ಆಹಾರ ಕ್ರಮ | ನಿತ್ಯಹರಿದ್ವರ್ಣ ಕಾಡುಗಳಲ್ಲಿನ ಕೀಟಗಳು |
ಗೂಡು ಕಟ್ಟುವ ವಿಧಾನ | ಹಿಮಾಲಯದ ತಪ್ಪಲಿನ ಕಾಡುಗಳಲ್ಲಿ ಗೂಡು ಮಾಡಿ ಮರಿ ಮಾಡುತ್ತದೆ. ಅತಿ ಎತ್ತರದ ಪ್ರದೇಶದ ಕಾಡುಗಳಲ್ಲಿ ಮರಗಳ ಡೊಗರುಗಳು, ಬಂಡೆಗಳ ಬಿರಕುಗಳಲ್ಲಿ ಗೂಡು ಕಟ್ಟುತ್ತದೆ. ಏಪ್ರಿಲ್ ಇಂದ ಜೂನ್ ತಿಂಗಳ ಅವಧಿಯಲ್ಲಿ ಗೂಡು ಮಾಡುತ್ತದೆ. |
ಕಾಣಸಿಗುವ ಸ್ಥಳಗಳು | ಭಾರತದ ಪಶ್ಚಿಮ ಘಟ್ಟದ ಕಾಡುಗಳಲ್ಲಿ ಹೆಚ್ಚು ಕಂಡು ಬರುತ್ತದೆ. ಸಿಲೋನ್ ಹೊರತುಪಡಿಸಿ ಭಾರತ ಉಪ ಖಂಡದಲ್ಲಿ ಎಲ್ಲೆಡೆ ನೋಡಬಹುದು. ಚಳಿಗಾಲದಲ್ಲಿ ಪಂಜಾಬ್ ಹಾಗೂ ರಾಜಸ್ಥಾನ್ ಗಳಲ್ಲಿ ಇರುವುದಿಲ್ಲ. |
ಚಿತ್ರ ಕೃಪೆ | Deepak L M |
Common English Name | Blue-headed Rock-Thrush |
Conservation Status | Least Concern |
Scientific Classification | |
Scientfic Name | Monticola cinclorhynchus |
Kingdom | Animalia |
Class | Aves |
Order | Passeriformes |
Superfamily | |
Family | Muscicapidae |
Subfamily | |
Tribe | |
Genus | Monticola |
Species | M. cinclorhynchus |