ಹಕ್ಕಿ ಪರಿಚಯ | |
---|---|
ಇತರ ಹೆಸರುಗಳು | ಕಂದು ತಲೆ ನೆಲಸಿಳ್ಳಾರ, ಪಟ್ಟೆ ನೆಲಗುಟುರ |
ಹಕ್ಕಿ ವಿವರಣೆ | * ಮೈನಾ ಹಕ್ಕಿ ಗಾತ್ರದ ಗುಂಡಗಿರುವ ಮೋಟು ಬಾಲದ ಹಕ್ಕಿ. * ರೆಕ್ಕೆ ಬೆನ್ನು, ಬಾಲಗಳು ತೆಳು ನೀಲಿ ಬಣ್ಣ * ತಲೆ, ಎದೆ ಹಾಗೂ ಹೊಟ್ಟೆಯ ಭಾಗ ಕಿತ್ತಳೆ ಬಣ್ಣ. * ಕುತ್ತಿಗೆ ಬೆಳ್ಳಗಿದ್ದು, ಕೆನ್ನೆಯ ಮೇಲೆ ಕರಿ ಪಟ್ಟೆಗಳಿವೆ, ಕಾಲುಗಳು ಉದ್ದವಾಗಿರುತ್ತದೆ. * ಹೆಣ್ಣು ಹಕ್ಕುತೆಳು ಹಸಿರು ಬಣ್ಣವಿರುತ್ತದೆ, ಕೊಕ್ಕು ಕೆಂಬಣ್ಣವಿರುತ್ತದೆ. * ದಟ್ಟಕಾಡಿನ ತಂಪಾದ ಪ್ರದೇಶದಲ್ಲಿ ನೆಲದ ಮೇಲೆ ಕುಪ್ಪಳಿಸುತ್ತಾ ಓಡಾಡಿಕೊಂಡಿರುತ್ತದೆ. |
ವಿಶೇಷತೆಗಳು | ನೆಲದ ಮೇಲೆ ಗೋಲಿ ಉರುಳಿದಂತೆ ಓಡಾಡುತ್ತವೆ. ಹಿಮಾಲಯ ಬಿಟ್ಟು ಬೇರೆಡೆ ಕಾಣುವ ಹಕ್ಕಿಗಳ ಕುತ್ತಿಗೆ ಬಳಿ ಬಿಳಿ ಬಣ್ಣ ಇರುವುದಿಲ್ಲ. ಮಳೆಗಾಲ, ಚಳಿಗಾಲದಲ್ಲಿ ಮೌನಿಯಾಗಿರುವ ಹಕ್ಕಿ, ಗೂಡು ಕಟ್ಟುವ ಸಮಯದಲ್ಲಿ ಸುಮಧುರವಾಗಿ ಸಿಳ್ಳಿನ ರಾಗಾಪಾಲನೆ ಮಾಡುತ್ತದೆ. |
ಆಹಾರ ಕ್ರಮ | ಕಾಡಿನಲ್ಲಿ ನೆಲದ ಮೇಲೆ ಬಿದ್ದಿರುವ ಎಲೆಗಳ ಕಸದ ರಾಶಿಯಲ್ಲಿ ಕಂಡು ಬರುವ ಹುಳ ಹುಪ್ಪಟೆ ತಿನ್ನುತ್ತದೆ |
ಗೂಡು ಕಟ್ಟುವ ವಿಧಾನ | ಮೇ ಇಂದ ಜೂನ್ ತಿಂಗಳ ಅವಧಿಯಲ್ಲಿ ಗೂಡು ಕಟ್ಟುತ್ತದೆ |
ಕಾಣಸಿಗುವ ಸ್ಥಳಗಳು | ಹಿಮಾಲಯ, ಉತ್ತರ ಭಾರತದಲ್ಲಿ ಹೆಚ್ಚಾಗಿ ಕಾಣುತ್ತದೆ. ದಟ್ಟ ಕಾಡುಗಳಲ್ಲಿ ವಾಸಿಸುತ್ತದೆ. |
ಚಿತ್ರ ಕೃಪೆ | Deepak L M |
Common English Name | Orange-headed Thrush, |
Conservation Status | Least Concern |
Scientific Classification | |
Scientfic Name | Zoothera citrina |
Kingdom | Animalia |
Class | Aves |
Order | Passeriformes |
Superfamily | |
Family | Turdidae |
Subfamily | |
Tribe | |
Genus | Geokichla |
Species | G. citrina |