ಕಂದುತಲೆ ನೆಲಸಿಳ್ಳಾರ | Orange-headed Thrush,


ಹಕ್ಕಿ ಪರಿಚಯ
ಇತರ ಹೆಸರುಗಳು ಕಂದು ತಲೆ ನೆಲಸಿಳ್ಳಾರ, ಪಟ್ಟೆ ನೆಲಗುಟುರ
ಹಕ್ಕಿ ವಿವರಣೆ * ಮೈನಾ ಹಕ್ಕಿ ಗಾತ್ರದ ಗುಂಡಗಿರುವ ಮೋಟು ಬಾಲದ ಹಕ್ಕಿ.
* ರೆಕ್ಕೆ ಬೆನ್ನು, ಬಾಲಗಳು ತೆಳು ನೀಲಿ ಬಣ್ಣ
* ತಲೆ, ಎದೆ ಹಾಗೂ ಹೊಟ್ಟೆಯ ಭಾಗ ಕಿತ್ತಳೆ ಬಣ್ಣ.
* ಕುತ್ತಿಗೆ ಬೆಳ್ಳಗಿದ್ದು, ಕೆನ್ನೆಯ ಮೇಲೆ ಕರಿ ಪಟ್ಟೆಗಳಿವೆ, ಕಾಲುಗಳು ಉದ್ದವಾಗಿರುತ್ತದೆ.
* ಹೆಣ್ಣು ಹಕ್ಕುತೆಳು ಹಸಿರು ಬಣ್ಣವಿರುತ್ತದೆ, ಕೊಕ್ಕು ಕೆಂಬಣ್ಣವಿರುತ್ತದೆ.
* ದಟ್ಟಕಾಡಿನ ತಂಪಾದ ಪ್ರದೇಶದಲ್ಲಿ ನೆಲದ ಮೇಲೆ ಕುಪ್ಪಳಿಸುತ್ತಾ ಓಡಾಡಿಕೊಂಡಿರುತ್ತದೆ.
ವಿಶೇಷತೆಗಳು ನೆಲದ ಮೇಲೆ ಗೋಲಿ ಉರುಳಿದಂತೆ ಓಡಾಡುತ್ತವೆ. ಹಿಮಾಲಯ ಬಿಟ್ಟು ಬೇರೆಡೆ ಕಾಣುವ ಹಕ್ಕಿಗಳ ಕುತ್ತಿಗೆ ಬಳಿ ಬಿಳಿ ಬಣ್ಣ ಇರುವುದಿಲ್ಲ. ಮಳೆಗಾಲ, ಚಳಿಗಾಲದಲ್ಲಿ ಮೌನಿಯಾಗಿರುವ ಹಕ್ಕಿ, ಗೂಡು ಕಟ್ಟುವ ಸಮಯದಲ್ಲಿ ಸುಮಧುರವಾಗಿ ಸಿಳ್ಳಿನ ರಾಗಾಪಾಲನೆ ಮಾಡುತ್ತದೆ.
ಆಹಾರ ಕ್ರಮ ಕಾಡಿನಲ್ಲಿ ನೆಲದ ಮೇಲೆ ಬಿದ್ದಿರುವ ಎಲೆಗಳ ಕಸದ ರಾಶಿಯಲ್ಲಿ ಕಂಡು ಬರುವ ಹುಳ ಹುಪ್ಪಟೆ ತಿನ್ನುತ್ತದೆ
ಗೂಡು ಕಟ್ಟುವ ವಿಧಾನ ಮೇ ಇಂದ ಜೂನ್ ತಿಂಗಳ ಅವಧಿಯಲ್ಲಿ ಗೂಡು ಕಟ್ಟುತ್ತದೆ
ಕಾಣಸಿಗುವ ಸ್ಥಳಗಳು ಹಿಮಾಲಯ, ಉತ್ತರ ಭಾರತದಲ್ಲಿ ಹೆಚ್ಚಾಗಿ ಕಾಣುತ್ತದೆ. ದಟ್ಟ ಕಾಡುಗಳಲ್ಲಿ ವಾಸಿಸುತ್ತದೆ.
ಚಿತ್ರ ಕೃಪೆ Deepak L M
Common English Name Orange-headed Thrush,
Conservation Status Least Concern
Scientific Classification
Scientfic Name Zoothera citrina
Kingdom Animalia
Class Aves
Order Passeriformes
Superfamily
Family Turdidae
Subfamily
Tribe
Genus Geokichla
Species G. citrina